ದೇವಸ್ಥಾನಕ್ಕೆ ಹೋದಾಗ ಚಪ್ಪಲಿಯನ್ನು
ಹೊರ ಬಿಡುವುದಿಲ್ಲ ನಾನೇ ಹೋರಗೆ ಇರುತ್ತೇನೆ ಎನ್ನುವ ಮೂಲಕವೇ ಅಸ್ಪೃಶ್ಯತೆಯ ಕ್ರೌರ್ಯದ ಮುಖವನ್ನು ತೆರೆದಿಡುತ್ತಾರೆ.
ಚಮ್ಮಾರ ವೃತ್ತಿ ಕುಲವನ್ನು ಅವಮಾನಿಸುವರು ಚಪ್ಪಲಿಯಿಲ್ಲದೆ ಬದುಕಲಾರರು ಚಮ್ಮಾರ ವೃತ್ತಿ, ಅದು ನೀಡಿದ ಜಾತಿ ಎರೆಡು ತನ್ನ ಆಧಾರ ಮತ್ತು ಬೇರು ಎಂದು ಕವಿ ಹೇಳುತ್ತಾರೆ
ವೈಭವೋಪೇತ ಅಲಂಕಾರಗಳಿಂದ ಕಂಗೊಳಿಸುವ ದೇವರ ಮೂರ್ತಿ ಕವಿಗೆ ಭಕ್ತಿ ಗಿಂತ ಹೆಚ್ಚು ಅಸಹನೆ ಮೂಡಿಸುತ್ತದೆ ಬಿಟ್ಟ ಬಯಲಲ್ಲಿದ್ದರೂ ಯಾವ ಅಲಂಕಾರಗಳಿಲ್ಲದಿದ್ದರೂ ದಿಟ್ಟವಾಗಿ ನೇರವಾಗಿ ಧೈರ್ಯವಾಗಿ ದೇವರಿಗೆ ಸಡ್ಡು ಹೊಡೆಯುವಂತೆ ಮುಖಾಮುಖಿಯಾಗಿ
ನಿಂತಿರುವ ಗರುಡಗಂಭವೂ ಇಷ್ಟವೆನ್ನುತ್ತಾರೆ
ಕಲ್ಲು ರೂಪಗಳಿಗೆ ಆಕಾರ ಕೊಡುವವರು ನಾವೇ ನಮ್ಮ ಚಿತ್ತದಂತೆ ನಮ್ಮ ದೈವ ವೆನ್ನುವ ನಿಲುವು ಸ್ಪಷ್ಟವಾಗಿದೆ
ಕಲ್ಲು ರೂಪದ ದೈವ ಹಾಗೂ ಗರುಡಗಂಬದ ಮುಖಾಮುಖಿ ದಿಟ್ಟತನ ಮತ್ತು ವೈಚಾರಿಕತೆಗೆ
ರೂಪಕವಾಗಿದೆ ದೇವರೆದುರು ನಿಂತು ಬಿಚ್ಚಿಟ್ಟ ಬಂದ ಚಪ್ಪಲಿಯನ್ನು
ಧ್ಯಾನಿಸುವವರ ಚಿತ್ತಕ್ಕೆ ಅಲಂಕಾರ ಹೂವು ಗಂಧ ತೀರ್ಥ-ಪ್ರಸಾದ ಗಳ ಮೇಲೆ ದೃಷ್ಟಿ ಆದರೆ ನನ್ನ ಚಿತ್ತ ದೇವರ ತನ್ನ ಆತ್ಮ ದೇವರ ಬಳಿಗೆ ಎನ್ನುವ ಕವಿಯ ಮಾತು ಅರ್ಥಗರ್ಭಿತವಾಗಿದೆ
ಕಾನೂನುಗಳಿಂದ ಅಸ್ಪೃಶ್ಯತೆಯನ್ನು ನಾಶ ಮಾಡಲಾರದು ಎಂಬುದು ನಿಜವಾದರೂ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಶಾಸನ ವೆಂಬ ಸಾಧನದ ಬಳಕೆ ಅಗತ್ಯವಾಗಿದೆ
ಆಧುನಿಕ ಜಗತ್ತಿನ ನಾಗರಿಕ ಪರಿಸರದಲ್ಲಿ ಅಮಾನುಷ ದಮನಕ್ಕೊಳಗಾದ
ಅನುಭವ ಪರಿಸರದೊಡನೆ ತನ್ನನ್ನು ತಾನು ಗುರುತಿಸಿಕೊಳ್ಳಲು ಸಾಧ್ಯವಾಗುವುದಿಲ್ಲ
ತನ್ನನ್ನು ಆತ್ಮೀಯವಾಗಿ ಬರ ಮಾಡಿಕೊಳ್ಳಲಾರದ ಅಮಾನವೀಯ ಸಾಮಾಜಿಕ ರಾಜಕೀಯ ವ್ಯವಸ್ಥೆಯ ವಿರುದ್ಧ ತಿಳಿ ಕಾರುವಂತೆ ಆಗುತ್ತದೆ
ಸಮಕಾಲೀನ ದೃಷ್ಟಿಯಿಂದ ನೋಡಿದರೆ ದಲಿತರಿಗೆ ಸಂವಿಧಾನದಲ್ಲಿ ರಿಯಾಯಿತಿಗಳು
ಕೊಡಲ್ ಪಟ್ಟಿದ್ದರು ಮೀಸಲಾತಿ ಯೊಂದೇ ದಲಿತರಲ್ಲಿ ಸ್ವಾಭಿಮಾನವನ್ನು ಪ್ರಚೋದಿಸಿ ಬೆಳೆಸುವುದು ಅಸಾಧ್ಯ
ಅಸ್ಪೃಶ್ಯತೆಯ ಆಚರಣೆ ಅಪರಾಧ ಮಾನವ ಮತ್ತು ದೈವದ್ರೋಹ ಎಂಬ ಮುಕ್ತ ಫಲಕಗಳನ್ನು ಪ್ರಕಟಿಸಿದರಷ ಸಾಲದು ಜಾತಿಪದ್ಧತಿ ಮತ್ತು ಅದಕ್ಕೆ ಧಾರ್ಮಿಕ ಮಂಜೂರಾತಿ ನೀಡಿರುವ ವರ್ಣವ್ಯವಸ್ಥೆ ನಾಶವಾಗಬೇಕು ದಲಿತರಿಗೆ ದೇವಸ್ಥಾನದ ಪ್ರವೇಶ ದೊರಕಿಸಿದರು ಮಾತ್ರ ಅವರ ಉದ್ಧಾರ ಆಗಿಬಿಡುವುದಿಲ್ಲ
ಸ್ವಲ್ಪಮಟ್ಟಿನ ಆತ್ಮಸ್ಥೈರ್ಯ ಆದರಿಂದ ತುಂಬಲು ಸಾಧ್ಯ ದಮನಿತ ಜಾತಿಯ ಹಕ್ಕುಗಳಿಗಾಗಿ ಹೋರಾಟಕ್ಕೆ ಇದರಿಂದ ಸಹಾಯವಾಗಬಹುದು ಆದರೂ ನಡೆಯುವ ಹೋರಾಟದಲ್ಲಿ ಇದು ಮೊದಲ ಹೆಜ್ಜೆ ಅಷ್ಟೇ
ಅಸಮಾನತೆಯನ್ನು ಧಿಕ್ಕರಿಸುವ ಪ್ರಯತ್ನ ಮಾತ್ರ ಆದರೆ ದಲಿತರ ಅಭಿವೃದ್ಧಿಯನ್ನು ಅಕ್ಷರ ಆರೋಗ್ಯ ಆಹಾರ ಆದಾಯ ಮತ್ತು ಆಸೆಗಳ ಮಾನದಂಡದಿಂದ ವ್ಯಾಖ್ಯಾನಿಸಬೇಕಾಗಿದೆ
ಜಾತಿ ವಿನಾಶಕ್ಕಾಗಿ ಜಾತಿ ಬೇಲಿಗಳನ್ನು ಮುರಿಯುವುದು ವೈಚಾರಿಕ ಜಾಗೃತಿ ಮೂಡಿಸುವುದು ವೈಚಾರಿಕ ಜಾಗೃತಿ ಮೂಡಿಸುವುದು ಹಾಗೂ ಅಸಮಾನತೆಯ ವಿರುದ್ಧ ಹೋರಾಡುವುದು ಒಟ್ಟೊಟ್ಟಿಗೆ ನಡೆಯಬೇಕಾಗುತ್ತದೆ
ಚಪ್ಪಲಿ ಬಹಿರಂಗದ ಗುರುತು ಇಂಥ ಹೊರಗಣ ಗುರುತುಗಳಿಂದ
ತಾನು ಅಸ್ತಿತ್ವವನ್ನು ಪಡೆಯುವುದನ್ನು
ನಿರಾಕರಿಸುವ ಕವಿ ತನ್ನ ಅಂತರಂಗದ ಆಲೋಚನೆಗಳ ಮೂಲಸೆಲೆಯನ್ನು
ಮುಂದಿಟ್ಟು ತನ್ನ ಅಸ್ತಿತ್ವ ಮತ್ತು ಅನನ್ಯತೆಯನ್ನು ಕಾಣಿಸುತ್ತಾರೆ
ಅಸ್ಪೃಶ್ಯತೆಯ ಕರಾಳ ಘೋಷಣೆಯನ್ನು ಹಿಮ್ಮೆಟ್ಟಿಸಲು ಅಂತರಂಗದ ಗಟ್ಟಿ ಸತ್ವದೊಂದಿಗೆ ವೈಚಾರಿಕ ಸಾಧ್ಯತೆ ಅವಶ್ಯಕವಾಗಿರುವುದನ್ನು ಈ ಕವನ ಶೋಧಿಸುತ್ತದೆ
No comments:
Post a Comment